ಯೇಸು ಕ್ರಿಸ್ತನು ಒಳ್ಳೆಯವನೆಂದು ನನಗೆ ತಿಳಿದಿದೆ, ಆದರೆ ಜನರು ಅಲ್ಲ, ಆದ್ದರಿಂದ ನಾವು ದೇವರ ಆಲಯಕ್ಕೆ ಹೋಗಲು ಬಯಸುವುದಿಲ್ಲ. ನಿಮ್ಮ ಅಭಿಪ್ರಾಯವೇನು?
ನಿಮ್ಮ ಹೃದಯದಲ್ಲಿನ ಕೆಲವು ಗೊಂದಲಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಗೊಂದಲವನ್ನು ಸ್ಪಷ್ಟವಾಗಿ ಪರಿಹರಿಸಲು ನೀವು ನಾಲ್ಕು ಭಾಗಗಳ ಪರೀಕ್ಷೆಯ ಶೋಧನೆಗೆ ಸಿದ್ಧರಾಗಿರಬೇಕು.
- ಯೇಸು ದೇವರ ಮಗನಾಗಿದ್ದನೇ?
- ತನ್ನ ಮಾತುಗಳು ಶಾಶ್ವತವಾಗಿವೆ ಮತ್ತು ಪ್ರತಿಯೊಬ್ಬ ಮನುಷ್ಯನೂ ಅವುಗಳಿಂದ ನಿರ್ಣಯಿಸಲ್ಪಡುತ್ತಾನೆ ಎಂದು ಯೇಸು ಹೇಳಿದ್ದನೋ?
- ಸತ್ಯವೇದವು ದೈವಿಕವಾಗಿ ಪ್ರೇರಿತವಾಗಿದೆಯೇ, ದೋಷರಹಿತವಾಗಿದೆಯೇ ಮತ್ತು ನಿಜವಾಗಿದೆಯೇ ಅಥವಾ ಅದು ಸಂಪೂರ್ಣವಾಗಿ ಸುಳ್ಳು ಮತ್ತು ಮೋಸವಾಗಿದೆಯೇ?
- ದೇವರನ್ನು ಗೌರವಿಸಲು, ಮಹಿಮೆಪಡಿಸಲು ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಇತರ ಕ್ರೈಸ್ತರೊಂದಿಗೆ ಒಟ್ಟುಗೂಡುವುದರ ಬಗ್ಗೆ ಸತ್ಯವೇದವು ಸ್ಪಷ್ಟವಾಗಿ ಕಲಿಸುವದನ್ನು ನಾನು ಪಾಲಿಸುತ್ತೇನೆಯೇ?
ಸತ್ಯವೇದದ ವಚನಗಳಲ್ಲಿ ಯಾವುದನ್ನು ಅವರು ಪಾಲಿಸಲು ಬಯಸುತ್ತಾರೋ ಅಥವಾ ಯಾವುದಕ್ಕೆ ಅವಿಧೇಯರಾಗಲು ಬಯಸುತ್ತಾರೋ, ಅವುಗಳಲ್ಲಿ ಯಾವುದನ್ನು “ಆರಿಸಿ ಆಯ್ಕೆ ಮಾಡಿಕೊಳ್ಳುವ” ಧೈರ್ಯವಿರುವುದಿಲ್ಲ. ದಯವಿಟ್ಟು ನಿಮ್ಮ ಪ್ರಶ್ನೆಗೆ ಉತ್ತರಿಸುವ ಈ ಕೆಳಗಿನ ಪ್ರೇರಿತ, ದೋಷರಹಿತ ಸತ್ಯವನ್ನು ಹುಡುಕಿ.
ಸಂದರ್ಭ: ಯೇಸು ಪರಿಪೂರ್ಣನಾಗಿದ್ದನು, ಆದರೂ ಆತನು ಯಾವಾಗಲೂ ಜನರಿಂದ ಸುತ್ತುವರಿಯಲ್ಪಡಬೇಕೆಂದು ಬಯಸಿದ್ದನು. ಯೇಸು ಜನರನ್ನು ಪ್ರೀತಿ ಮಾಡಿದನು. ಅವರಿಗೆ ಅತ್ಯುತ್ತಮವಾದದನ್ನು ಬಯಸಿದನು. ಈ ಜನರು ಅಂತಿಮವಾಗಿ ಆತನನ್ನು ತ್ಯಜಿಸುತ್ತಾರೆ ಮತ್ತು ಆತನನ್ನು ನಿರಾಕರಿಸುತ್ತಾರೆ ಎಂದು ಆತನಿಗೆ ತಿಳಿದಿತ್ತು. ಆತನನ್ನು ಬಂಧಿಸಲು, ಅಪಹಾಸ್ಯ ಮಾಡಲು, ದೂಷಿಸಲು, ಚಿತ್ರಹಿಂಸೆಗೊಳಪಡಿಸಲು ಮತ್ತು ಶಿಲುಬೆಗೆ ನೇತು ಹಾಕುವ ಮರಣದಂಡವನ್ನು ಬಯಸುವದರಿಂದ ಇತರರು ಪಿತೂರಿ ಮಾಡುತ್ತಾರೆ ಎಂದು ಆತನಿಗೆ ತಿಳಿದಿತ್ತು, ಇದು ಮನುಷ್ಯನು ರೂಪಿಸಬಹುದಾದ ಅತ್ಯಂತ ಕ್ರೂರವಾದ ಮರಣವಾಗಿತ್ತು.
ಸತ್ಯ: ಆದರೂ, ನಂಬಲಾಗದ ಯಾತನೆಯ ನಡುವೆಯೂ “ಜನರ” ಬಗ್ಗೆ ಯೇಸು ಹೇಳಿದ್ದು ಇದನ್ನೇ:-
ಲೂಕ 23:34 ಆಗ ಯೇಸು – ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಅಂದನು. ಆಮೇಲೆ ಆತನ ಬಟ್ಟೆಗಳನ್ನು ಪಾಲುಮಾಡಿ ಚೀಟು ಹಾಕಿದರು.
ವೈಯಕ್ತಿಕ ಅನ್ವಯ: ಯೇಸು ಮಾನವಕುಲವನ್ನು, ತನ್ನ ಸೃಷ್ಟಿಯನ್ನು ಪ್ರೀತಿಸಿದನು ಮತ್ತು ಅಂತಹ ದುಃಖಿತ ಜನರಿಗಾಗಿ ಸಾಯಲು ಸಿದ್ಧನಾಗಿದ್ದನು. ದೇವರನ್ನು ಆರಾಧಿಸಲು ಇತರರೊಂದಿಗೆ ಒಟ್ಟುಗೂಡುವುದು ಯೇಸುಕ್ರಿಸ್ತನ ಮೇಲಿನ ನಮ್ಮ ಪ್ರೀತಿಯ ಆಜ್ಞೆ ಮತ್ತು ದೃಷ್ಟಾಂತವಾಗಿದೆ ಎಂದು ಪವಿತ್ರಾತ್ಮನು ನಮಗೆ ಹೇಳಿದಾಗ, ನಾವು ಪಾಪಿಗಳಾದ ಆತನ ಅನುಯಾಯಿಗಳು, ಇತರ ಪಾಪಿಗಳು ನಮ್ಮ ಒಡೆಯನು ಮತ್ತು ಸಂರಕ್ಷಕನಂತೆ ಪರಿಪೂರ್ಣರಾಗಿಲ್ಲ ಎಂಬ ಕಾರಣಕ್ಕಾಗಿ ಅವರನ್ನು “ಭೇಟಿಯಾಗಲು, ಅಂದರೆ ಸ್ಪರ್ಶಿಸಲು” ನಿರಾಕರಿಸುವಷ್ಟು ಸ್ವಕೇಂದ್ರಿತರಾಗಿರಬಹುದೇ?
ಸತ್ಯ: ಯೇಸುಕ್ರಿಸ್ತನಲ್ಲಿ ನಮ್ಮ ಪ್ರೀತಿಯನ್ನು ನಾವು ನಿಜವಾಗಿಯೂ ತೋರಿಸಬಹುದಾದ ಏಕೈಕ ದೈಹಿಕ ಮಾರ್ಗವೆಂದರೆ “ನಮ್ಮ ನೆರೆಯವರನ್ನು ಪ್ರೀತಿಸುವುದು” (ಮತ್ತಾಯ 19:19 ). ಒಬ್ಬ ವ್ಯಕ್ತಿಯು ಅವರನ್ನು ದೈಹಿಕವಾಗಿ ಭೇಟಿಯಾಗದ ಹೊರತು ಜನರಿಗೆ ಪ್ರೀತಿಯನ್ನು ತೋರಿಸುವುದು ಅಸಾಧ್ಯ. ಒಟ್ಟಿಗೆ ಸೇರಬೇಕೆಂಬ ಪವಿತ್ರಾತ್ಮನ ಆಜ್ಞೆಗೆ ವಿಧೇಯರಾಗಿರುವುದು ಒಬ್ಬರ ಹೃದಯದಲ್ಲಿ ಯೇಸು ಕ್ರಿಸ್ತನ ಮೇಲೆ ಇರುವ ಪ್ರೀತಿಯ ಖಚಿತ ಪರೀಕ್ಷೆಯಾಗಿರುತ್ತದೆ.
- ಇಬ್ರಿಯರಿಗೆ 10:24-25 ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ;
- ಲೂಕ 6:46-49 ಇದಲ್ಲದೆ ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ? ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಯಾರಿಗೆ ಸಮಾನನೆಂಬದನ್ನು ನಿಮಗೆ ತೋರಿಸುತ್ತೇನೆ. ಅವನು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೇ ಕಟ್ಟಿದವನಿಗೆ ಸಮಾನನು; ಹೊಳೆಬಂದು ಪ್ರವಾಹವು ಆ ಮನೆಗೆ ಬಡಿದಾಗ್ಯೂ ಅದು ಚೆನ್ನಾಗಿ ಕಟ್ಟಿದ್ದರಿಂದ ಆ ಪ್ರವಾಹವು ಅದನ್ನು ಅಲ್ಲಾಡಿಸಲಾರದೆ ಹೋಯಿತು. ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದಿರುವವನು ಅಸ್ತಿವಾರವಿಲ್ಲದೆ ನೆಲದ ಮೇಲೆ ಮನೇ ಕಟ್ಟಿದವನಿಗೆ ಸಮಾನನು. ಪ್ರವಾಹವು ಅದಕ್ಕೆ ಬಡಿಯಿತು; ಬಡಿದ ಕೂಡಲೆ ಅದು ಕುಸಿದುಬಿದ್ದು ಪೂರಾ ಹಾಳಾಯಿತು.
- ಯೋಹಾನ 12:47-49 ಯಾವನಾದರೂ ನನ್ನ ಮಾತುಗಳನ್ನು ಕೇಳಿದರೂ ಕೈಕೊಂಡು ನಡೆಯದೆ ಹೋದರೆ ನಾನೇ ಅವನಿಗೆ ತೀರ್ಪುಮಾಡುವದಿಲ್ಲ; ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ನಾನು ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ. ನನ್ನನ್ನು ಲಕ್ಷ್ಯಮಾಡದೆ ನನ್ನ ಮಾತುಗಳನ್ನು ಅಂಗೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದು ಒಂದು ಇದೆ, ಅದು ಯಾವದಂದರೆ, ನಾನು ಆಡಿದ ಮಾತು; ಅದೇ ಅವನಿಗೆ ಕಡೇ ದಿನದಲ್ಲಿ ತೀರ್ಪುಮಾಡುವದು. ಯಾಕಂದರೆ ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ – ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ.
- ಯೋಹಾನ 14:23-24 ಯೇಸು ಅವನಿಗೆ – ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವದಿಲ್ಲ; ನೀವು ಆಲಿಸುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯ ಮಾತೇ.
ಸತ್ಯವೇದವನ್ನು ಬೋಧಿಸುವ ಸಭೆಗೆ ನೀವು ಹೋಗುವಾಗ, ಬೆರೋಯ ಊರಿನವರಿಗೆ ಹೇಳುವ ಅಪೊಸ್ತಲರ ಕೃತ್ಯಗಳು 17:11 ಅನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. “ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಶುದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” ನಾವು ಕೇಳಿ ಖಚಿತಪಡಿಸುವುದು ದೇವರ ವಾಕ್ಯಕ್ಕೆ ಅನುಗುಣ ವಾಗಿದೆಯಾ ಎಂದು ದೃಢೀಕರಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಇದು ನಿಮಗೆ ಹೆಚ್ಚು ಸ್ಪಷ್ಟತೆಯನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಪ್ರಶ್ನೆಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ನಮಗೆ ಅವಕಾಶವಿರುವುದರಿಂದ ಅವೆಲ್ಲಕ್ಕೂ ಉತ್ತರಿಸಲು ಪ್ರಯತ್ನಿಸಲು ನಾವು ಸಂತೋಷಪಡುತ್ತೇವೆ.
ಕ್ರಿಸ್ತನಲ್ಲಿ ನಿಮ್ಮೆಲ್ಲರಿಗೂ, ನಮ್ಮ ಪ್ರೀತಿ,
ಜಾನ್ + ಫಿಲಿಸ್ + ಸ್ನೇಹಿತರು @ WasItForMe.com